137/29,48th Cross,17th main 3rd block, Near ESI hospital Rajajinagar Bangalore-10
presidentofkpc@gmail.com
+91 8029523444
137/29,48th Cross,17th main 3rd block, Near ESI hospital Rajajinagar Bangalore-10
presidentofkpc@gmail.com
+91 8029523444
ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್
ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್’ ಪತ್ರಕರ್ತರ ಏಳಿಗೆಗೆ ಮಾತ್ರ ಸೀಮಿತವಾಗಿರದೆ, ಅನೇಕ ಜನಪರ ಕಾಳಜಿಯುಳ್ಳ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿದೆ. ಪತ್ರಕರ್ತರ ಮಕ್ಕಳಿಗೆ ಉಚಿತ ಟ್ಯಾಬ್ ವಿತರಣೆ ಲಯನ್ಸ್ ಕ್ಲಬ್ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ, ರಕ್ತದಾನ ಶಿಬಿರ, ಕಣ್ಣಿನ ತಪಾಸಣೆ ಶಿಬಿರ, ಅನಾಥಾಶ್ರಮಗಳಿಗೆ ಉಚಿತವಾಗಿ ಆಹಾರ ಸಾಮಗ್ರಿಗಳನ್ನು ಒದಗಿಸುವುದು, ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ, ವಿದ್ಯಾರ್ಥಿ ವೇತನ ನೀಡುವುದು, ಪರಿಸರ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಸಿಗಳನ್ನು ನೆಡುವ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಾ, ಸಾಮಾಜಿಕ ಮತ್ತು ಕನ್ನಡ ಪರ ಸೇವಾ ಕಾರ್ಯಗಳಲ್ಲಿ ನಮ್ಮ ಸಂಸ್ಥೆ ಪ್ರಾಮಾಣಿಕವಾಗಿ ತೊಡಗಿಸಿಕೊಂಡಿದೆ. ಕೋವಿಡ್ ಸಮಯದಲ್ಲಿ ಹಗಲಿರುಳು ಪ್ರಾಮಾಣಿಕ ಸೇವೆ ಸಲ್ಲಿಸಿದವರಿಗೆ ‘ಕರೋನ ಸೇವಾರತ್ನ ಪ್ರಶಸ್ತಿ’ , ಪತ್ರಿಕೋದ್ಯಮದಲ್ಲಿ ಅಪಾರ ಸಾಧನೆಗೈದ ಪತ್ರಕರ್ತರಿಗೆ ‘ರಾಜ್ಯ ಮಾಧ್ಯಮ ಸೇವಾ ರತ್ನ’ ಪ್ರಶಸ್ತಿ, ಕಲಾವಿದರನ್ನು ಪ್ರೋತ್ಸಾಹಿಸುವ ಸಲುವಾಗಿ ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು ನಗರ ಜಿಲ್ಲೆ ಸಹಯೋಗದಲ್ಲಿ ರಾಜ್ಯ ಕಲಾ ಸೇವಾರತ್ನ ಪ್ರಶಸ್ತಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದ ಹೆಗ್ಗಳಿಕೆಗೆ ಪಾತ್ರವಾಗಿದೆ. ಜನೀಶ್ ಎಂಬ ಪುಟ್ಟ ಬಾಲಕ ಬೆನ್ನು ಮೂಳೆ ಸ್ನಾಯು ಕೊರತೆ ಎಂಬ ಅಪರೂಪದ ಖಾಯಿಲೆಗೆ ತುತ್ತಾಗಿದ್ದು ಈ ಕಂದನಿಗೆ ವಿದೇಶದಿಂದ 16ಕೋಟಿಯ ದುಬಾರಿ ಇಂಜೆಕ್ಷನ್ ಕೊಡಿಸಲು ಕಂದನ ಉಳಿಸು ಎಂಬ ಕಾರ್ಯಕ್ರಮ ಮಾಡಿ ಹಣ ಸಂಗ್ರಹಣೆ ಮಾಡಿ ಕೊಟ್ಟಿದೆ. ಅಮೆರಿಕಾ, ದುಬೈ, ಯು.ಕೆ. ಯುರೋಪ್ ಸೌದಿ ಅರೇಬಿಯಾ, ಜರ್ಮನ್, ಆಸ್ಟ್ರೇಲಿಯಾ ರಾಷ್ಟಗಳಿಗೆ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಅಧ್ಯಕ್ಷರುಗಳನ್ನು ನೇಮಕ ಮಾಡಿ, ಅಲ್ಲಿರುವ ಕನ್ನಡಿಗರ ಸಮಸ್ಯೆಗಳಿಗೆ ನೆರವಾಗುತ್ತಾ, ವಿದೇಶಗಳಲ್ಲೂ ತನ್ನ ಛಾಪನ್ನು ಮೂಡಿಸುತ್ತಿದೆ. ಅಪಾರ ಕನ್ನಡ ನಾಡು ನುಡಿಯನ್ನು ವಿಶ್ವಕ್ಕೆ ಪರಿಚಯಿಸುವ ಉದ್ದೇಶದಿಂದ ಸಂಸ್ಥೆ ವಿಸ್ಮಯನಗರಿ ದುಬೈ ನಲ್ಲಿ ಮೈಸೂರು ಮಹಾರಾಜರಾದ ಶ್ರೀ. ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್‌ರವರ ಗೌರವಾಧ್ಯಕ್ಷತೆಯಲ್ಲಿ ವಿಶ್ವ ಕನ್ನಡ ಹಬ್ಬವನ್ನು ಅದ್ದೂರಿಯಾಗಿ ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಮಹಾನ್ ಕಲಾವಿದರು, ಸಿನಿಮಾ ತಾರೆಗಳು, ಕವಿಗಳು, ಸಾಹಿತಿಗಳು ಭಾಗವಹಿಸಿದ್ದು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರಿಗೆ “ಅಂತಾರಾಷ್ಟ್ರೀಯ ವಿಶ್ವಮಾನ್ಯ ಪ್ರಶಸ್ತಿ” ಪ್ರದಾನ ಮಾಡಲಾಗಿದೆ.
ಮಹಿಳಾ, ಯುವ, ಮಕ್ಕಳ ಕ್ಷೇಮಾಭಿವೃದ್ಧಿ, ಪತ್ರಕರ್ತರಿಗೆ ಅನ್ಯಾಯವಾದಲ್ಲಿ ಅವರಿಗೆ ಉಚಿತ ನ್ಯಾಯ ಒದಗಿಸಲು ಕಾನೂನು ವಿಭಾಗ , ಸಾಂಸ್ಕೃತಿಕ , ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ , ವೈದ್ಯಕೀಯ ಇನ್ನೂ ಹಲವಾರು ಘಟಕಗಳಿಗೆ ರಾಜ್ಯ, ರಾಷ್ಟ, ಅಂತಾರಾಷ್ಟ್ರೀಯ ಘಟಕವಾರು ಅಧ್ಯಕ್ಷರುಗಳ ನೇಮಕ ಮಾಡುವ ಮೂಲಕ ಎಲ್ಲಾ ಕ್ಷೇತ್ರಗಳ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಸದೃಢ ಸಮಾಜ ನಿರ್ಮಾಣವೇ ಸಂಸ್ಥೆಯ ಮುಖ್ಯ ನಿಲುವು. ಮಕ್ಕಳಿಗೆ ಹಾಗೂ ಜನಸಾಮಾನ್ಯರಿಗೆ ಕಾನೂನಿನ ಅರಿವು ಮತ್ತು ಸರ್ಕಾರದ ಸೌಲಭ್ಯಗಳ ಬಗ್ಗೆ ತಿಳುವಳಿಕೆ ನೀಡಲು ಪರಿಣಿತರಿಂದ ಶಿಬಿರಗಳನ್ನು ನಡೆಸಿದೆ. ಸಾಂಸ್ಕöÈತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಕಲಾವಿದರಿಗೆ ವೇದಿಕೆ ನೀಡಿದೆ. ಗ್ರಾಮೀಣ ಪ್ರದೇಶದ ತೆರೆಮರೆಯ ಕಲಾವಿದರನ್ನು ಗುರುತಿಸಿ ಮುಂಚೂಣಿಗೆ ತರುವ, ಕನ್ನಡ ನಾಡು – ನುಡಿ, ಸಾಹಿತ್ಯ – ಸಂಸ್ಕöÈತಿಯನ್ನು ಉಳಿಸಿ ಬೆಳೆಸುವಲ್ಲಿ ಸಂಸ್ಥೆ ಗಣನೀಯ ಕೊಡುಗೆ ನೀಡುತ್ತಿದೆ. ಕನ್ನಡ ಪರ ಹೋರಾಟಗಳಲ್ಲಿ ನಮ್ಮ ಸಂಸ್ಥೆಯ ಸದಸ್ಯರು ಸಕ್ರಿಯವಾಗಿದ್ದಾರೆ ಹಾಗೂ ಕನ್ನಡ ಬರಹಗಾರರಿಗೆ ಸಹಾಯ ಮತ್ತು ಸಹಕಾರ ನೀಡಲಾಗುತ್ತಿದೆ.
ಡಾ. ಶಿವಕುಮಾರ್ ನಾಗರ ನವಿಲೆ ಹಿರಿಯ ಪತ್ರಕರ್ತರು, ಕಣ್ಣುಪತ್ರಿಕೆ ಪ್ರಧಾನ ಸಂಪಾದಕರು, ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಸಂಸ್ಥೆಯ ರಾಜ್ಯ ಅಧ್ಯಕ್ಷರು. ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ರಾಷ್ಟೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಸಾಧನೆ ಮಾಡುತ್ತಿದ್ದು, ಇಲ್ಲಿಯವರೆಗೂ ಸಾಕಷ್ಟು ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ. ಕನ್ನಡ ನಾಡು- ನುಡಿ, ಸಾಹಿತ್ಯ – ಸಂಸ್ಕೃತಿಯನ್ನು ಉಳಿಸಿ ಬೆಳೆಸುವಂತಹ ಕನ್ನಡಪರ ಕಾರ್ಯಕ್ರಮಗಳು, ರಕ್ತದಾನ ಶಿಬಿರಗಳು, ಪರಿಸರ ಜಾಗೃತಿ ಮೂಡಿಸುವಂತಹ ಕಾರ್ಯಕ್ರಮಗಳು ಮತ್ತು ಪತ್ರಕರ್ತರ ಮಕ್ಕಳಿಗೆ ಉಚಿತ ಟ್ಯಾಬ್ ವಿತರಣೆ, ಕರೋನ ಸಮಯದಲ್ಲಿ ದುಡಿದಂತವರಿಗೆ ಕರೋನ ಸೇವಾರತ್ನ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಹೀಗೆ ಹಲವಾರು ಕಾರ್ಯಕ್ರಮಗಳನ್ನು ಮಾಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಮೇರಿಕಾ, ದುಬೈ, ಯು.ಕೆ ಮತ್ತು ಯುರೋಪ್ ರಾಷ್ಟ್ರಗಳಿಗೆ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಅಧ್ಯಕ್ಷರುಗಳನ್ನು ನೇಮಕ ಮಾಡಿ ಸಂಸ್ಥೆಯನ್ನು ವಿದೇಶದೆಲ್ಲೆಡೆ ವಿಸ್ತರಿಸುವ ಕೆಲಸ ಮಾಡುತ್ತಿದ್ದೇವೆ. ಸಂಸ್ಥೆಯ ದ್ಯೇಯ ಪತ್ರಕರ್ತರಿಗೆ ನೆರವು, ಹಸಿದವರಿಗೆ ಅನ್ನ, ಬಡಮಕ್ಕಳಿಗೆ ಉಚಿತ ವಿದ್ಯಾಭ್ಯಾಸ, ಹಿರಿಯ ಪತ್ರಕರ್ತರನ್ನು ಗುರುತಿಸಿ ಸನ್ಮಾನಿಸುವುದು ಮುಂತಾದ ಸಾಮಾಜಿಕ ಸೇವಾಕಾರ್ಯಗಳ ಉದ್ದೇಶವನ್ನು ಹೊಂದಿದೆ.